Tomato Kattu Saru | Tomato Saru without dal | Tomato Rasam without dal | ಟೊಮೇಟೊ ಕಟ್ ಸಾರು | No Onion No Garlic No Dal Tomato Rasam
Tomato Kattsaru | ಟೊಮೇಟೊ ಕಟ್ ಸಾರು
Tomato kattusaru is a traditional recipe which is made with the combination of spices like coriander, cumin and methi. Every household has different recipe for kattusaru. This is a sathvik food which can be consumed at any point of time. Do give it a try and share your opinion.
Ingredients Required
- Coriander seeds - 2 Tsp
- Cumin Seeds / Jeera - 1 Tsp
- Fenugreek seeds / Methi seeds - 1/2 Tsp
- Asafeotida / Hing - 3 to 4 pinch
- Red chillies (Byadagi) - 3 to 4
- Tomato - 2
- Coriander leaves - 1 Tbsp
- Curry Leaves - 1 Tsp
- Mustard seeds - 1/2 Tsp
- Oil - 1 Tbsp
- Salt - As per the taste
- Jaggery - 1 Tsp
- Water - As per the requirement
Method of Preparation
- To a pan add oil, add coriander seeds, cumin seeds, methi seeds fry each of them for 5 to 10 seconds. Now add redchilles and half tomato and 1/2 tsp curry leaves fry them. Now add Hing and fry it for 10 seconds.
- After this add 1/4 cup of water and cook it for 2 to 3 minutes. Now cool down the mixture and grind it to fine paste.
- Into a pan add oil, once oil is hot add mustard seeds, curry leaves fry them. Now add tomato's fry it for 2 minutes. Add water and salt as per the requirement, then cook it for 3 to 5 minutes. Once tomato's are soft add grounded mixture, salt, water and jaggery, mix them well. Boil them for 7 to 10 minutes. After 10 minutes add coriander leaves and switch off the flame. Delicious and healthy Tomato kattusaru is ready to serve.
ಬೇಕಾಗುವ ಸಾಮಗ್ರಿಗಳು
- ಕೊತ್ತಂಬರಿ ಬೀಜ - ೨ ಟೀ ಚಮಚ
- ಜೀರಿಗೆ - ೧ ಟೀ ಚಮಚ
- ಮೆಂತೆ - ೧/೨ ಟೀ ಚಮಚ
- ಇಂಗು - ೩ ರಿಂದ ೪ ಚಿಟಿಕೆ
- ಕೆಂಪು ಮೆಣಸು (ಬ್ಯಾಡಗಿ) - ೩ ರಿಂದ ೪
- ಟೊಮೇಟೊ - ೨
- ಕೊತ್ತಂಬರಿ ಸೊಪ್ಪು - ೧ ಟೇಬಲ್ ಚಮಚ
- ಕರಿಬೇವು / ಬ್ಬೆಸೊಪ್ಪು - ೧ ಟೀ ಚಮಚ
- ಸಾಸಿವೆ - ೧/೨ ಟೀ ಚಮಚ
- ಎಣ್ಣೆ - ೧ ಟೇಬಲ್ ಚಮಚ
- ಉಪ್ಪು - ರುಚಿಕೆ ತಕ್ಕಷ್ಟು
- ಬೆಲ್ಲ - ೧ ಟೀ ಚಮಚ
- ನೀರು - ಅವಶ್ಯಕತೆಗೆ ಅನುಸಾರವಾಗಿ
ಮಾಡುವ ವಿಧಾನ
- ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾಗುತಿದ್ದಂತೆ ಅದಕ್ಕೆ ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಕಾಳು ಹಾಕಿ ೧೦ ಸೆಕೆಂಡುಗಳ ಕಾಲ ಹುರಿಯಬೇಕು. ಇನ್ನು ಇದಕ್ಕೆ ಕೆಂಪು ಮೆಣಸು, ೧/೨ ಟೊಮೇಟೊ ಹಾಕಿ ೩೦ ಸೆಕೆಂಡುಗಳ ಕಾಲು ಹುರಿಯಬೇಕು. ಇದಕ್ಕೆ ೧/೨ ಟೀ ಚಮಚ ಕರಿಬೇವು ಮತ್ತು ಇಂಗು ಹಾಕಿ ಹುರಿಯಬೇಕು. ನಂತರ ೧/೨ ಗ್ಲಾಸ್ ಆಗುವಷ್ಟು ನೀರು ಹಾಕಿ ೩ ರಿಂದ ೪ ನಿಮಿಷ ಬೇಯಿಸಬೇಕು.
- ಈ ಮಿಶ್ರಣವನ್ನು ತಣಿಸಿ , ಇದನ್ನು ನುಣ್ಣಗೆ ರುಬ್ಬಬೇಕು.
- ಇನ್ನು ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿ ಆಗುತಿದ್ದಂತೆ ಅದಕ್ಕೆ ಸಾಸಿವೆ, ಕರಿಬೇವು ಹಾಕಿ ಹುರಿಯಬೇಕು. ಇದಕ್ಕೆ ೧ ೧/೨ ಟೊಮೇಟೊ ಹಾಕಿ ಅದನ್ನು ಹುರಿದು ಕೊಳ್ಳಬೇಕು. ಇನ್ನು ಇದಕ್ಕೆ ನೀರು ಮತ್ತು ಉಪ್ಪು ಹಾಕಿ ೩ ರಿಂದ ೫ ನಿಮಿಷ ಬೇಯಿಸಬೇಕು. ನಂತರ ಇದಕ್ಕೆ ರುಬ್ಬಿದ ಮಿಶ್ರಣ ಹಾಕಿ ಬೇಕಾದಷ್ಟು ನೀರು, ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲ ಹಾಕಿ ಚೆನ್ನಾಗಿ ಬೆರೆಸಿ ೭ ರಿಂದ ೧೦ ನಿಮಿಷ ಕುದಿಸಬೇಕು. ಇನ್ನು ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸ್ ಆಫ್ ಮಾಡಿದರೆ ಟೊಮೇಟೊ ಕಟ್ಟುಸರು ತಯಾರಾಗುತದೆ.
- ಆರೋಗ್ಯಕರವಾದ ಸಾರು ಅನ್ನದ ಜೊತೆ ಸವಿಯಲು ತುಂಬ ಚೆನ್ನಾಗಿ ಇರುತದೆ.
Comments
Post a Comment