Heerekayi chatti| Ridge guard dosa | ಹೀರೆಕಾಯಿ ದೋಸಾ।ಹೀರೆಕಾಯಿ ಕಲ್ಲಲ್ಲಿ ಇಟ್ಟದ್ದು
Ingredients Required
- Rice - 1 cup
- Urad dal - 2 tsp
- Red chillies - 4 to 5
- Asafoetida - 1/2 tsp
- Jaggery - 2 tbsp
- Salt - As per the taste
- Coriander seeds - 2 tbsp
- Cumin seeds - 1 tsp
- Tamarind - 1/2 lemon sized
- Cocount - 4 to 5 tbsp
- Rich gourd - 1 (Cut it to slices)
- Oil / ghee / butter - as per your taste
- Water - As much as required
Method of preparation
- Soak rice and urad dal for atleast 4 to 5 hours or overnight.
- Now take a mixi jar and add the rice, urad dal, red chillis, tamarind, jaggery, coriander seeds, cumin seeds, coconunt, Asafoetida and salt to it.
- Now add water to mixi jar and grind it to a fine paste of all ingredients.
- Batter consistency should not be very thin or very thick. it should be in medium consistency.
- Cut the ridge gourd to slices , it should be in round shape.
- Now take a tava and keep it on stove, switch on the stove, heat should be in medium flame
- Once tava is heated, dip the ridge gourd in batter and keep it on tava, so that every piece is connected to one another.
- You can arrange ridgegourd in any shape.
- Now put oil/ ghee/ butter to one side and close the lid.
- After 2 min remove the lid and flip the dosa to other side and put oil / ghee / butter to another side.
- Leave it to cook for 2 min.
- Shift Ridge gourd dosa from tava to serving plate
- Now herekayi dosa or herekayi chatti or ridge gourd dosa is ready to serve.
- Serve this dosa as it is or with coconut chutney.
- This is a famous south canara traditional dish.
ಬೇಕಾಗುವ ಸಾಮಗ್ರಿಗಳು
- ಅಕ್ಕಿ - ೧ ಕಪ್
- ಉದ್ದಿನಬೇಳೆ - ೨ ಟೀ ಸ್ಪೂನ್
- ಕೆಂಪುಮೆಣಸು - ೪ ರಿಂದ ೫
- ಇಂಗು - ೧/೨ ಟೀ ಸ್ಪೂನ್
- ಬೆಲ್ಲ - ೨ ಟೇಬಲ್ ಸ್ಪೂನ್
- ಹುಳಿ -೧/೨ ಲಿಂಬೆ ಹುಳಿ ಗಾತ್ರ
- ಉಪ್ಪು - ರುಚಿಗೆ ತಕ್ಕಷ್ಟು
- ಕೊತ್ತಂಬರಿ - ೨ ಟೇಬಲ್ ಸ್ಪೂನ್
- ಜೀರಿಗೆ - ೧ ಟೀ ಸ್ಪೂನ್
- ತೆಂಗಿನ ಕಾಯಿ ತುರಿ - ೪ ರಿಂದ ೫ ಟೀ ಸ್ಪೂನ್
- ಎಣ್ಣೆ/ ತುಪ್ಪ/ ಬೆಣ್ಣೆ - ರುಚಿಗೆ ಬೇಕಾದಷ್ಟು
- ಹೀರೆಕಾಯಿ - ೧
- ನೀರು - ಬೇಕಾದಷ್ಟು
ಮಾಡುವ ವಿಧಾನ
- ಅಕ್ಕಿ ಮತ್ತು ಉದ್ದಿನಬೇಳೆಯನ್ನು ೪ ರಿಂದ ೫ ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಬೇಕು.
- ನಂತರ ಒಂದು ಮಿಕ್ಸಿ ಜಾರನ್ನು ತೆಗೆದು ಕೊಂಡು ಅದಕ್ಕೆ ಅಕ್ಕಿ, ಉದ್ದಿನಬೇಳೆ, ಕೆಂಪುಮೆಣಸು, ಇಂಗು, ಬೆಲ್ಲ, ಹುಳಿ, ಕೊತ್ತಂಬರಿ, ಜೀರಿಗೆ, ತೆಂಗಿನಕಾಯಿ ತುರಿ, ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
- ರುಬ್ಬಿದ ಮಿಶ್ರಣ ತುಂಬಾ ನೀರು ಆಗಿರಬಾರದು, ತುಂಬಾ ಗಟ್ಟಿನೂ ಆಗಬಾರದು, ಹದವಾಗಿ ಮಿಶ್ರಣವಿರಬೇಕು.
- ಈಗ ಹೀರೆಕಾಯಿ ಅನ್ನು ವೃತ್ತಾಕಾರದಲ್ಲಿ ತುಂಡು ಮಾಡಿ ಇಟ್ಟುಕೊಳ್ಳಿ.
- ಇನ್ನೊಂದು ಸೈಡಿನಲ್ಲಿ ತವಾವನ್ನು ಗ್ಯಾಸ್ ಮೇಲೆ ಇಟ್ಟು ಗ್ಯಾಸ್ ಆನ್ ಮಾಡಿ.
- ತವ ಕಾದ ನಂತರ ಹೀರೆಕಾಯಿ ತುಂಡು ಮಾಡಿ ಇಟ್ಟದ್ದನ್ನು ಮಿಶ್ರಣದಲ್ಲಿ ಮುಳುಗಿಸಿ ಕಾವಲಿಯಲ್ಲಿ ಹತ್ತಿರ ಹತ್ತಿರ ಜೋಡಿಸಬೇಕು.
- ಒಂದು ಹೀರೆಕಾಯಿಯಿಂದ ಇನೊಂದಕ್ಕೆ ಗ್ಯಾಪ್ ಇರಬಾರದು. ನಿಮಗೆ ಯಾವ ಆಕಾರಬೇಕು ಅದೇ ರೀತಿ ಇಟ್ಟುಕೊಳ್ಳಿ.
- ಈಗ ಅದಕ್ಕೆ ಎಣ್ಣೆ ಅಥವಾ ತುಪ್ಪ ಅಥವಾ ಬೆಣ್ಣೆ ಹಾಕಿ ೨ ನಿಮಿಷಗಳ ಕಾಲ ಮುಚ್ಚಿ ಇಡಿ.
- ೨ ನಿಮಿಷಗಳ ನಂತರ ದೋಸಾವನ್ನು ಇನ್ನೊಂದು ಸೈಡ್ ಮಗುಚಿ ಆ ಸೈಡಿಗೆ ಕೂಡ ಎಣ್ಣೆ , ತುಪ್ಪ ಅಥವಾ ಬೆಣ್ಣೆ ಹಾಕಿ ೨ ನಿಮಿಷಗಳ ಕಾಲ ಬೇಯಿಸಿ.
- ಈಗ ಸರ್ವ್ ಮಾಡುವ ತಟ್ಟೆಗೆ ಹಾಕಿದರೆ ಹೀರೆಕಾಯಿ ದೋಸೆ ಅಥವಾ ಹೀರೆಕಾಯಿ ಕಲ್ಲಲ್ಲಿ ಇಟ್ಟದು ರೆಡಿ ಆಗಿದೆ.
Instant Paddu/Instant guliyappa /Instant appo
ಧಿಡೀರ್ ಪಡ್ಡು/ಧಿಡೀರ್ ಗುಳಿಯಪ್ಪ
Ingredients Required
- Rava - 1 cup
- Curd - 1/2 cup
- onion - 1
- carrot - 1
- coriander lea - 1 tbsp
- eno - 1/4 tsp
- water - As per requirement
- salt - as per the taste
Method of Preparation
- In a mixing bowl, mix rava ,curd and salt . if required pore little bit of water and keep a side for 10 minutes.
- After 10 minutes add onion, carrot and coriander leaves to that and mix well.
- Now add eno and water mix well, the consistency should be like idli batter.
- Now switch on the gas , it should be in medium flame.
- Keep paddu tava in gas stove put little oil to tava, once tava is heated pore paddu batter.
- close the tava for 2 min, after 2 min flip the paddu to other side and cook for 2 min.
- After 2 min remove it from tava, paddu is ready to serve.
Note: Paddu is tasty to serve with chutney and chutney powder.
ಬೇಕಾಗುವ ಸಾಮಗ್ರಿಗಳು
- ರವ - ೧ ಕಪ್
- ಮೊಸರು - ೧/೪ ಕಪ್
- ಈರುಳ್ಳಿ - ೧
- ಕ್ಯಾರಟ್ - ೧
- ಕೊತ್ತಂಬರಿ ಸೊಪ್ಪು - ೧ ಟೇಬಲ್ ಸ್ಪೂನ್
- eno - ೧/೪ ಟೀ ಸ್ಪೂನ್
- ನೀರು - ಬೇಕಾದಷ್ಟು
- ಉಪ್ಪು - ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
- ಮೊದಲಿಗೆ ಒಂದು ಪಾತ್ರದಲ್ಲಿ ರವ ತೆಗೆದುಕೊಂಡು ಅದಕ್ಕೆ ಮೊಸರು , ಉಪ್ಪು ಸ್ವಲ್ಪ ನೀರು ಹಾಕಿ ಕಲಸಿ ೧೦ ನಿಮಿಷಗಳ ಕಾಲ ಬಿಡಬೇಕು.
- ೧೦ ನಿಮಿಷಗಳ ನಂತರ ಅದಕ್ಕೆ ಈರುಳ್ಳಿ, ಕ್ಯಾರಟ್ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ಆ ಮಿಶ್ರಣಕ್ಕೆ eno ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ತಯಾರಾದ ಹಿಟ್ಟು ಇಡ್ಲಿ ಹದಕ್ಕೆ ಬರಬೇಕು.
- ಈಗ ಗ್ಯಾಸ್ ಸ್ಟವ್ ಆನ್ ಮಾಡಿ, ಮೀಡಿಯಂ ಫ್ಲೇಮ್ ಅಲ್ಲಿ ಇಡಬೇಕು.
- ನಂತರ ಪಡ್ಡು ತವವನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು.
- ತವ ಬಿಸಿ ಆದ ನಂತರ ಅದಕ್ಕೆ ಪಡ್ಡು ಹಿಟ್ಟು ಹಾಕಿ ೨ ನಿಮಷ ಬೇಯಿಸಬೇಕು. ಒಂದು ಸೈಡ್ ಬೆಂದ ನಂತರ ಉಲ್ಟಾ ಮಾಡಿ ಹಾಕಿ ೨ ನಿಮಿಷಗಳ ಕಾಲ ಬೇಯಿಸಬೇಕು.
- ಈಗ ಪಡ್ಡು ರೆಡಿ ಆಗಿದೆ , ಒಂದು ಪಾತ್ರಕ್ಕೆ ಶಿಫ್ಟ್ ಮಾಡಿಕೊಳ್ಳಿ.
ಸೂಚನೆ : ಪಡ್ಡುವನ್ನು ಚಟ್ನಿ ಅಥವಾ ಚಟ್ನಿ ಪುಡಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.
Comments
Post a Comment