Protein Bar | Healthy Snack | Easy Sweet recipe | Dryfruit Bar | Diet Bar | ಪ್ರೋಟೀನ್ ಬಾರ್ | ಆರೋಗ್ಯಕರ ಖಾದ್ಯ
ಪ್ರೋಟೀನ್ ಬಾರ್ । Protein Bar
Protein Bar or Diet Bar is a healthy mixture of Different seeds like sunflower seeds, Melon Seeds and Dry fruits with natural sweetness of Dates. This is the best snack to have pre workout or post workout. If Kids are fuzzy to have dryfruits and nuts this would be the best method to make them consume it. Different modification or addition of ingredients can be made based on your requirement, taste and availability. Do try it out and share your feedback.
Ingredients Required
- Cashew - 1/4 Cup
- Almonds - 1/4 Cup
- Walnuts - 1/4 Cup
- Sunflower seeds - 1 Tbsp
- Flax seeds - 2 Tbsp
- Melon Seeds - 1 Tbsp
- Pumpkin seeds - 1 Tbsp
- Poppy seeds - 1 Tbsp
- Dry coconut powder - 2 Tbsp
- Dates - 1 Cup
- Water - 3 Tbsp
- Ghee / Clarified Butter - 3 Tsp
Method of Preparation
- To a Pan add 3 Tbsp water, heat it, now add dates , then close the lid and rest it for atleast 15 to 20 minutes.
- Heat a pan, add sunflower seeds, melon seeds, pumpkin seeds, fry for a minute, shift it to a plate.
- In same pan add flax seeds, fry until it splutters, shift it to a plate.
- To a hot pan add almonds, cashew and walnuts fry it for a minute, now transfer it to a plate.
- Now grind soaked dates to a coarse paste, if required add 2 tsp of hot water.
- Now grind all the fried mixture, transfer it to a plate.
- To a hot pan add poppy seeds, dry coconut powder, fry it until poppy seeds splutters. Shift it to a separate plate.
- Heat another pan, add ghee, once ghee is hot add grinded dates, fry it well until all the moisture in it is evaporated. Now add grinded dry fruit mixture and combine it well by adding another tea spoon of ghee.
- Once they are blended well add poppy seed and coconut mixture, mix it well.
- Shift this mixture to a greased plate (grease plate using ghee), flatten it up and cut it to desired shape.
- Now allow the mixture to cool down for room temperature. Now you can separate the pices.
- Healthy yet delicious diet bar/ protein bar / snack bar is ready.
- This can be stored for 15 days in room temparature.
ಬೇಕಾಗುವ ಸಮಾಗ್ರಿಗಳು
- ಗೋಡಂಬಿ - ೧/೪ ಕಪ್
- ಬಾದಾಮಿ - ೧/೪ ಕಪ್
- ಸೂರ್ಯಕಾಂತಿ ಬೀಜ - ೧ ಟೇಬಲ್ ಚಮಚ
- ಅಗಸೆ ಬೀಜ - ೨ ಟೇಬಲ್ ಚಮಚ
- ಕುಂಬಳಕಾಯಿ ಬೀಜ - ೧ ಟೇಬಲ್ ಚಮಚ
- ಕಲ್ಲಂಗಡಿ ಬೀಜಗಳು - ೧ ಟೇಬಲ್ ಚಮಚ
- ಖರ್ಜೂರ - ೧ ಕಪ್
- ಒಣ ಕೊಬ್ಬರಿ ಪುಡಿ - ೨ ಟೇಬಲ್ ಚಮಚ
- ಗಸ ಗಸೆ - ೧ ಟೇಬಲ್ ಚಮಚ
- ಅಕ್ರೋಟ್ - ೧/೪ ಕಪ್
- ನೀರು - ೩ ಟೇಬಲ್ ಚಮಚ
- ತುಪ್ಪ - ೩ ಟೀ ಚಮಚ
ಮಾಡುವ ವಿಧಾನ
- ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಅದು ಕುಡಿ ಬಂದ ಮೇಲೆ ಖರ್ಜೂರ ಹಾಕಿ ಗ್ಯಾಸ್ ಆಫ್ ಮಾಡಿ ಮುಚ್ಚಿ ೨೦ ರಿಂದ ೩೦ ನಿಮಿಷಗಳ ಕಾಲ ನೆನೆಯಲು ಬಿಡಬೇಕು.
- ಇನ್ನು ಬೇರೊಂದು ಬಾಣಾಲೇ ತೆಗೆದೊಕೊಂಡು ಅದು ಬಿಸಿ ಆದ ನಂತರ ಅದಕ್ಕೆ ಅಗಸೆ ಬೀಜ ಹಾಕಿ ಹುರಿಯಬೇಕು.
- ಇನ್ನು ಹುರಿದ ಅಗಸೆ ಬೀಜವನ್ನು ತಣಿಯಲು ಬಿಡಬೇಕು.
- ಮತ್ತೆ ಅದೇ ಬಿಸಿ ಬಾಣಾಲೇಗೆ ಸೂರ್ಯಕಾಂತಿ ಬೀಜ, ಕಲ್ಲಂಗಡಿ ಬೀಜ, ಕುಂಬಳಕಾಯಿ ಬೀಜ ಗಳನ್ನೂ ಹಾಕಿ ೧ ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿಯಬೇಕು. ಇದನ್ನು ಕೂಡ ತಣಿಯಲು ಬಿಡಬೇಕು.
- ಇನ್ನು ಅದೇ ಬಾಣಾಲೇಗೆ ಗೋಡಂಬಿ, ಬಾದಾಮಿ, ಅಕ್ರೋಟ್ ಹಾಕಿ ೧ ನಿಮಿಷ ಸಣ್ಣ ಉರಿಯಲ್ಲಿ ಹುರಿಯಬೇಕು. ನಂತರ ಇದನ್ನು ಕೂಡ ತಣಿಯಲು ಬಿಡಬೇಕು.
- ಇನ್ನು ಖರ್ಜೂರವನ್ನು ತರಿ ತರಿಯಾಗಿ ರುಬ್ಬಿಕೊಳ್ಳಬೇಕು.
- ಹಾಗೆ ಹುರಿದ ಡ್ರೈ ಫ್ರುಇಟ್ಸ್ ಗಳನ್ನು ಕೂಡ ತರಿ ತರಿಯಾಗಿ ಪುಡಿ ಮಾಡಿಕೊಳ್ಳಬೇಕು.
- ಇನ್ನು ಮತ್ತೆ ಒಂದು ಬಿಸಿ ಬಾಣಲೆಗೆ ಗಸ ಗಸೆ ಹಾಕಿ ಹುರಿಯಬೇಕು. ಮತ್ತೆ ಅದಕ್ಕೆ ಕೊಬ್ಬರಿ ತುರಿ ಹಾಕಿ ಗಸ ಗಸೆ ಸಿಡಿಯುವ ತನಕ ಹುರಿಯಬೇಕು. ಇನ್ನು ಇದನ್ನು ತಣಿಯಲು ಬಿಡಬೇಕು.
- ಇನ್ನು ಒಂದು ಬಾಣಲೆಗೆ ತುಪ್ಪ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಖರ್ಜೂರ ಹಾಕಿ ಅದರ ನೀರಿನ ಅಂಶ ಆವಿಯಾಗುವ ತನಕ ಹುರಿದುಕೊಳ್ಳಬೇಕು. ಇನ್ನು ಅದಕ್ಕೆ ಡ್ರೈ ಫ್ರೂಟ್ ಮಿಶ್ರಣದ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಬೇಕು. ಇದನ್ನು ಚೆನ್ನಾಗಿ ಬೆರೆಸಿಕೊಂಡ ನಂತರ ಇದಕ್ಕೆ ಸ್ವಲ್ಪ ತುಪ್ಪ ಹಾಕಿ ಮಿಶ್ರ ಮಾಡಿಕೊಳ್ಳಬೇಕು. ಇನ್ನು ಹುರಿದಿಟ್ಟುಕೊಂಡ ಗಸ ಗಸೆ ಮತ್ತು ಕೊಬ್ಬರಿತುರಿ ಮಿಶ್ರಣ ವನ್ನು ಹಾಕಿ ಬೆರೆಸಿಕೊಂಡರೆ ಪ್ರೋಟೀನ್ ಬಾರ್ ತಯಾರಾಗುತದೆ.
- ಇನ್ನು ಒಂದು ತಟ್ಟೆಗೆ ತುಪ್ಪ ಸವರಿ ಅದಕ್ಕೆ ತಯಾರಾದ ಮಿಶ್ರಣ ಹಾಕಿ, ಬೇಕಾದ ಆಕಾರಕ್ಕೆ ತುಂಡರಿಸಿಕೊಂಡರೆ ಪ್ರೋಟೀನ್ ಬಾರ್ ಸವಿಯಲು ಸಿದ್ದವಾಗುತ್ತದೆ.
Comments
Post a Comment