Ivy Gourd - Cashew Curry | ಮದುವೆ ಮನೆ ಶೈಲಿಯ ತೊಂಡೆಕಾಯಿ-ಗೋಡಂಬಿ(ಗೇರುಬೀಜ) ಪಲ್ಯ
Ivy gourd - cashew palya is a famous dish prepared in function of (mangalore-udupi (south karnataka) region. Due to high water content in ivygourd it helps to reduce constipation. Due to this its good for pregnant womens.
This Palya is a mixture of ivygourd and cahew fried with spices and cooked with water.
Ingredients required :
- Ivy gourd - 1/4 kg
- Cashew - 1/4 cup
- Red chilli - 4
- Grated Coconut - 5 to 6 tbsp
- Coriander seeds - 1/2 tsp
- Cumin seeds - 1/2 tsp
- Mustard seeds - 1 tsp
- Turmeric powder - 1/4 tsp
- Urad dal - 1/4 tsp
- Oil - 2 tbsp
- Curry leaves - 3 to 4 leaves
- Jaggery - 1 tsp
- Salt - As per the taste
- Water - As per your requirement
Method of Preparation:
- Soak the cashew in water for 10 minutes.
- Mean while take a mixi jar, add coconut, redchillis, coriander seeds and cumin seeds make a fine masala powder without water.
- Now take a pan add oil to it, once oil is heated add mustard seeds and red chilli.
- When mustard seeds starts sputtering add urud dal and curry leaves , fry for 30 seconds.
- Now add ivy gourd and fry it for 2 min.
- In this stage add cashew, fry for 1 minute and add turmeric powder, Jaggery and water to cook
- Close the pan with lid and cook for 5 minutes. After 5 minutes add salt and mix well
- If water is required to cook we have to add then leave it to cook. it will take 15 minutes.
- Once it is cooked add the masala powder which we made and mix well
- Close the lid and cook it for 2 to 3 minutes.
- Now Ivy gourd - cashew curry ready to serve.
ಬೇಕಾಗುವ ಸಾಮಗ್ರಿಗಳು :
- ತೊಂಡೆಕಾಯಿ - ೧/೪ ಕೆಜಿ
- ಗೋಡಂಬಿ - ೧/೪ ಕಪ್
- ಒಣ ಮೆಣಸಿನ ಕಾಯಿ - ೪
- ತೆಂಗಿನಕಾಯಿ ತುರಿ - ೫ ರಿಂದ ೬ ಟೇಬಲ್ ಚಮಚ
- ಜೀರಿಗೆ - ೧/೨ ಟೀ ಚಮಚ
- ಕೊತ್ತಂಬರಿ - ೧/೨ ಟೀ ಚಮಚ
- ಸಾಸಿವೆ - ೧ ಟೀ ಚಮಚ
- ಹಳದಿ ಪುಡಿ - ೧/೪ ಟೀ ಚಮಚ
- ಉದ್ದಿನಬೇಳೆ - ೧/೪ ಟೀ ಚಮಚ
- ಎಣ್ಣೆ - ೨ ಟೇಬಲ್ ಚಮಚ
- ಕರಿಬೇವಿನ ಎಸಳು - ೪ ರಿಂದ ೫
- ಬೆಲ್ಲ - ೧ ಟೀ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ನೀರು - ಬೇಕಾದಷ್ಟು
ಮಾಡುವ ವಿಧಾನ :
- ಮೊದಲಿಗೆ ಗೋಡಂಬಿಯನ್ನು ೧೦ ನಿಮಷಗಳ ಕಾಲ ನೀರಿಲ್ಲಿ ನೆನೆ ಹಾಕಬೇಕು.
- ಒಂದು ಮಿಕ್ಸಿ ಜಾರನ್ನು ತೆಗೆದು ಕೊಂಡು ಅದಕ್ಕೆ ತೆಂಗಿನ ಕಾಯಿ ತುರಿ, ೨ ಕೆಂಪುಮೆಣಸು, ಜೀರಿಗೆ ಮತ್ತು ಕೊತ್ತಂಬರಿ ಹಾಕಿ ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಬೇಕು.
- ಈಗ ಒಂದು ಪಾನ್ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ , ಎಣ್ಣೆ ಕಾದ ಮೇಲೆ ಅದಕ್ಕೆ ಸಾಸಿವೆ ಮತ್ತು ಕೆಂಪುಮೆಣಸು ಹಾಕಬೇಕು.
- ಸಾಸಿವೆ ಚಿಟಪಟ ಅಂದ ನಂತರ ಅದಕ್ಕೆ ಅದಕ್ಕೆ ಉದ್ದಿನಬೆಳೆ, ಕರಿಬೇವಿನ ಎಸಳು ಹಾಕಿ ೩೦ ಸೆಕೆಂಡುಗಳ ಕಾಲ ಫ್ರೈ ಮಾಡಬೇಕು.
- ಈಗ ತೊಂಡೆಕಾಯಿ ಹಾಕಿ ೨ ನಿಮಿಷಗಳ ಕಾಲ ಫ್ರೈ ಮಾಡಬೇಕು.
- ಈ ಹಂತದಲ್ಲಿ ಗೋಡಂಬಿ ಹಾಕಿ ೧ ನಿಮಿಷಗಳ ಕಾಲ ಫ್ರೈ ಮಾಡಬೇಕು. ನಂತರ ಅದಕ್ಕೆ ಅರಶಿನ, ಬೆಲ್ಲ ಮತ್ತು ಬೇಯಲು ಬೇಕಾದಷ್ಟು ನೀರು ಹಾಕಿ ೫ ನಿಮಿಷಗಳ ಕಾಲ ಬೇಯಿಸಬೇಕು.
- ೫ ನಿಮಷಗಳ ನಂತರ ಉಪ್ಪು ಹಾಕಿ ಚೆನ್ನಾಗಿ ಚೆನ್ನಾಗಿ ಮಿಕ್ಸ್ ಮಾಡಬೇಕು.
- ಈಗ ಬೇಯಲು ನೀರು ಬೇಕಾದರೆ ಹಾಕಿ ೧೫ ನಿಮಷಗಳ ಕಾಲ ಬೇಯಿಸಬೇಕು.
- ನಂತರ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ೨ ನಿಮಷಗಳ ಬೇಯಿಸಿದರೆ ತೊಂಡೆಕಾಯಿ - ಗೋಡಂಬಿ ಪಲ್ಯ ರೆಡಿ ಆಗಿದೆ.
Comments
Post a Comment