Mixed Veg Gravy | ಮಿಶ್ರ ತರಕಾರಿಗಳ ಸಾಗು
Ingredients Required
- Cucumber - 1/2 cup
- Potato - 1/2 cup
- Mixed Vegetable or carrot and raddish - 1 cup
- Capsicum - 1/2 cup
- Bengal Roasted Gram - 1 tbsp
- Curry Leaves - 1 tsp
- Red Chilli powder - 1 tsp
- Vangibath Powder - 1 tsp
- Salt - As per the taste
- Turmeric powder - 1/2 tsp
- Mustard seeds - 1 tsp
- Oil - 2 Tbsp
- Asafoetida - 1/4 tsp
- Jaggery - 2 tsp
- Coriander leaves - 2 tbsp
- Water - As much as required
Method of preparation
- Crush the bengal gram using motor and pessel or using mixer grinder.
- Take a pan add oil to it. Once oil is heated add mustard seeds and curry leaves to it.
- As soon as mustard seeds splutters, add chopped potato and fry it for 2 to 3 minutes.
- Now add Mixed Vegetables and fry it for 2 to 3 minutes.
- Now add capsicum and fry it for a minute.
- At this stage add turmeric powder,chilli powder and Asafoetida, mix them well.
- Now add cucumber and mix them well, then add salt to taste and Vangibath powder.
- At this stage add water based on the consistency required.
- Now add jaggery and crushed bengal gram powder, mix them well.
- Then add coriander leaves and mix them well.
- Cook this mixture for 7 to 8 minute, with closed lid.
- Now Hot and tasty Mixed Veg Gravy or saagu is ready to serve.
- This can be served with rice and roti.
ಬೇಕಾಗುವ ಸಾಮಗ್ರಿಗಳು
- ಮುಳ್ಳು ಸೌತೆ - ೧/೨ ಕಪ್
- ಆಲೂಗಡ್ಡೆ - ೧/೨ ಕಪ್
- ಕ್ಯಾರಟ್ ಮತ್ತು ಮೂಲಂಗಿ - ೧ ಕಪ್
- ಕ್ಯಾಪ್ಸಿಕಂ - ೧/೨ ಕಪ್
- ಪುಟಾಣಿ ಕಾಳು - ೧ ಟೇಬಲ್ ಚಮಚ
- ಕರಿಬೇವು - ೧ ಟೀ ಚಮಚ
- ಖಾರದ ಪುಡಿ - ೧ ಟೀ ಚಮಚ
- ಅರಶಿನ ಪುಡಿ - ೧/೨ ಟೀ ಚಮಚ
- ವಾಂಗೀಬಾತ್ ಪುಡಿ - ೧ ಟೀ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಸಾಸಿವೆ - ೧ ಟೀ ಚಮಚ
- ಇಂಗು - ೧/೪ ಟೀ ಚಮಚ
- ಬೆಲ್ಲ - ೨ ಟೀ ಚಮಚ
- ಕೊತ್ತಂಬರಿ ಸೊಪ್ಪು - ೨ ಟೇಬಲ್ ಚಮಚ
- ಎಣ್ಣೆ - ೨ ಟೇಬಲ್ ಚಮಚ
- ನೀರು - ಬೇಕಾದಷ್ಷ್ಟು
ಮಾಡುವ ವಿಧಾನ
- ಕುಟ್ಟಾಣಿಯಲ್ಲಿ ಪುಟಾಣಿ ಕಾಳನ್ನು ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಬೇಕು.
- ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಬೇಕು. ಎಣ್ಣೆ ಬಿಸಿ ಆದ ನಂತರ ಅದಕ್ಕೆ ಸಾಸಿವೆ ಮತ್ತು ಕರಿಬೇವು ಹಾಕಿ ಚೆನ್ನಾಗಿ ಹುರಿಯಬೇಕು.
- ಇನ್ನು ಇದಕ್ಕೆ ಆಲೂಗಡ್ಡೆ ಹಾಕಿ ಸುಮಾರು ೨ ರಿಂದ ೩ ನಿಮಿಷಗಳ ಕಾಲ ಫ್ರೈ ಮಾಡಬೇಕು.
- ನಂತರ ಇದಕ್ಕೆ ಮೂಲಂಗಿ ಮತ್ತು ಕ್ಯಾರಟ್ ಹಾಕಿ ೨ ರಿಂದ ೩ ನಿಮಿಷಗಳ ಕಾಲ ಫ್ರೈ ಮಾಡಬೇಕು.
- ತದನಂತರ ಇದಕ್ಕೆ ಕ್ಯಾಪ್ಸಿಕಂ ಹಾಕಿ ಸುಮಾರು ೧ ನಿಮಿಷಗಳ ಕಾಲ ಫ್ರೈ ಮಾಡಬೇಕು.
- ಇನ್ನು ಇದಕ್ಕೆ ಅರಶಿನ ಪುಡಿ, ಖಾರದ ಪುಡಿ ಮತ್ತು ಇಂಗು ಹಾಕಿ ಚೆನ್ನಾಗಿ ಫ್ರೈ ಮಾಡಿ.
- ಈಗ ಮುಳ್ಳು ಸೌತೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇನ್ನು ಉಪ್ಪು ಮತ್ತು ವಾಂಗೀಬಾತ್ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ಈಗ ಬೇಕಷ್ಟು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.
- ಇನ್ನು ಬೆಲ್ಲ ಮತ್ತು ಪುಟಾಣಿ ಪುಡಿ ಹಾಕಿ ಚೆನ್ನಾಗಿ ಕಲಸಬೇಕು.
- ಇನ್ನು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ಈ ಮಿಶ್ರಣವನ್ನು ಸುಮಾರು ೭ ರಿಂದ ೮ ನಿಮಿಷಗಳ ಕಾಲ ಮುಚ್ಚಿ ಬೇಯಿಸಿಕೊಳ್ಳಬೇಕು.
- ಈಗ ರುಚಿಕರವಾದ ಮಿಶ್ರ ತರಕಾರಿಗಳ ಸಾಗು ತಯಾರಾಗಿದೆ. ಇದ್ದನು ಅನ್ನ ಮತ್ತು ಚಪಾತಿ ಜೊತೆ ನಂಚಿಕೊಂಡು ತಿನ್ನಬಹುದು.
Comments
Post a Comment