Tukkudi / ತುಕ್ಕುಡಿ / Khara Shankarpoli
Ingredients Required:
- Wheat flour - 1 &1/2 cup
- Maida - 1/2 cup
- Sugar powder - 2 tbsp
- redchilli powder - 2 tsp
- oil - 2 tbsp (For mixing)
- oil - for frying
- salt - as per the taste
- water - As required
Method of Preparation:
- Take a mixing bowl add wheat flour, maida, salt, redchilli powder and sugar powder mix them well so that there are no lumps.
- Heat 2 tbsp of oil.
- Mix the heated oil to the mixture and mix it with spoon. once oil cools down then mix them using hands.
- Check whether all the mixture holds tightly, when it is taken within the fist. Then your mixture is perfect.
- Now add little by little water and form a dough which is neither too hard nor too soft which has medium texture.
- Now divide the mixture to equal portioned balls
- Roll these balls as similar as we roll for chapati, but not thin as chapatis.
- Now cut them to square or diamond shape using cutter or knife.
- Deep fry them in a oil which has medium hot temperature.
- Fry them until they changes its color to golden brown.
- Now Tukkudi or is also known as khara shankarpoli is ready.
ಬೇಕಾಗುವ ಸಾಮಗ್ರಿಗಳು :
- ಗೋಧಿಹಿಟ್ಟು - ೧ & ೧/೨ ಕಪ್
- ಮೈದಾಹಿಟ್ಟು - ೧/೨ ಕಪ್
- ಉಪ್ಪು - ರುಚಿಗೆ ತಕ್ಕಷ್ಟು
- ಸಕ್ಕರೆ ಪುಡಿ - ೨ ಟೇಬಲ್ ಚಮಚ
- ಖಾರದ ಪುಡಿ - ೨ ಟೀ ಚಮಚ
- ಎಣ್ಣೆ - ೨ ಟೇಬಲ್ ಚಮಚ (ಕಲಸಲು )
- ಎಣ್ಣೆ - ಕರಿಯಲು
- ನೀರು - ಬೆರೆಸಲು ಬೇಕಾದಷ್ಟು
ಮಾಡುವ ವಿಧಾನ :
- ಮೊದಲಿಗೆ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಗೋಧಿಹಿಟ್ಟು, ಮೈದಾಹಿಟ್ಟು , ಖಾರದ ಪುಡಿ, ಸಕ್ಕರೆ ಪುಡಿ, ಉಪ್ಪು ಹಾಕಿ ಕೈಯಲ್ಲಿ ಗಂಟಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಬೇಕು.
- ಈಗ ೨ ಟೇಬಲ್ ಚಮಚದಷ್ಟು ಎಣ್ಣೆಯನ್ನು ಬಿಸಿಮಾಡಿ ಇಟ್ಟುಕೊಳ್ಳಬೇಕು.
- ಈ ಬಿಸಿಯಾದ ಎಣ್ಣೆಯನ್ನು ಮಿಶ್ರಣಕ್ಕೆ ಹಾಕಿ ಚಮಚದ ಸಹಾಯದಿಂದ ಮಿಕ್ಸ್ ಮಾಡಿಕೊಳ್ಳಬೇಕು. ಎಣ್ಣೆಯ ಬಿಸಿ ಸ್ವಲ್ಪ ಆರಿದ ನಂತರ ಚೆನ್ನಾಗಿ ಕಲಸಿಕೊಳ್ಳಬೇಕು.
- ಒಂದು ಮುಷ್ಠಿ ಹಿಟ್ಟು ಕೈಯಲ್ಲಿ ತೆಗೆದುಕೊಂಡಾಗ ಅದು ಮುಷ್ಟಿಯ ಆಕಾರ ಪಡೆದುಕೊಂಡರೆ ಹಿಟ್ಟು ಹದವಾಗಿದೆ ಎಂದು ಅರ್ಥ.
- ಈಗ ಸ್ವಲ್ಪ ಸ್ವಲ್ಪವಾಗಿ ನೀರು ಹಾಕಿ ಹಿಟ್ಟನ್ನು ಕಲಸಬೇಕು.
- ಹಿಟ್ಟು ತುಂಬಾ ಮೃದು ಅಥವಾ ಗಟ್ಟಿಯಾಗಿ ಇರಬಾರದು. ಹದವಾಗಿ ಹಿಟ್ಟನ್ನು ಕಲಸಬೇಕು.
- ಹಿಟ್ಟು ರೆಡಿ ಆದ ನಂತರ ೫ ರಿಂದ ೧೦ ನಿಮಷಗಳ ಕಾಲ ಮುಚ್ಚಿ ಇಡಬೇಕು.
- ಈಗ ಹಿಟ್ಟನ್ನು ಸಮವಾಗಿ ಉಂಡೆಯನ್ನಾಗಿಸಿ ಅದನ್ನು ಚಪಾತಿಯಂತೆ ಲಟ್ಟಿಸಬೇಕು. ತುಂಬ ತೆಳುವಾಗಿ ಲಟ್ಟಿಸಬಾರದು.
- ಈಗ ಲಟ್ಟಿಸಿದ ಹಿಟ್ಟನ್ನು ಆಯತಾಕಾರಕ್ಕೆ ತುಂಡರಿಸಿಕೊಂಡು ಹದವಾಗಿ ಬಿಸಿಯಾಗಿರುವ ಎಣ್ಣೆಯಲ್ಲಿ ಕಾಯಿಸಿಕೊಳ್ಳಬೇಕು (ಕರಿಯಬೇಕು ).
- ತುಕ್ಕುಡಿ ಕಂದು ಬಣ್ಣಕ್ಕೆ ಬಂದರೆ ತಯಾರಾಗಿದೆ ಎಂದು ಅರ್ಥ.
- ರುಚಿಕರವಾದಂತಹ ತುಕ್ಕುಡಿ ಅಥವಾ ಖಾರ ಶಂಕರಪೋಳಿ ತಯಾರಾಗಿದೆ.
Comments
Post a Comment