Orange peel Chutney | ಕಿತ್ತಳೆ ಸಿಪ್ಪೆ ಚಟ್ನಿ | Best out of waste | Healthy chutney | Traditional Brahmin home style recipe
Orange Peel Chutney / ಕಿತ್ತಳೆ ಸಿಪ್ಪೆ ಚಟ್ನಿ
Ingredients Required
- Orange peel - peel of half big orange ( or as much as required)
- Red chillies (Byadagi) - 7 to 8
- Tamarind - small lemon sized
- Jaggery - 2 tbsp
- oil - 3 to 4 tsp
- Coconut - 2 tbsp
- Curry Leaves - 1 tsp
- Mustard seeds - 1 tsp
- Salt - As per the taste
- Water - As much as required
Method of Preparation
- Soak the tamarind for 10 to 15 minutes in water.
- Take a pan add 1 to 2 tsp of oil , once oil is heated add 5 to 6 redchillies and fry them for a minute.
- Now take a mixer jar add these fried redchillies, orange peel ( break them to smaller pieces), soaked tamarind, coconut and salt.
- Grind them to a coarse paste. Once its grinded to coarse paste add jaggery and water as much as required to the mixer jar.
- Again grind them all together to a fine paste.
- Now use the same pan which was used earlier for frying and add 2 tsp of oil to it.
- Once oil is heated add mustard seeds, 2 broken redchillies and curry leaves, Fry them until mustard seeds splutters.
- Now add grinded chutney to the tadka and add water as well as salt, based on the requirement. Get them to a boil.
- Once the chutney is boiled, its ready to serve.
- Serve this chutney with hot rice.
Note: This chutney can be stored in Refrigerator for 10 days.
Importance of Orange peel:
- Orange peel acts like anti inflammatory.
- Boosts immune system.
- Improves digestive system.
ಬೇಕಾಗುವ ಸಾಮಗ್ರಿಗಳು
- ಕಿತ್ತಳೆ ಹಣ್ಣಿನ ಸಿಪ್ಪೆ - ೧/೨ ಕಿತ್ತಳೆ ಹಣ್ಣಿನದ್ದು
- ಕೆಂಪು ಮೆಣಸು (ಬ್ಯಾಡಗಿ ) - ೭ ರಿಂದ ೮
- ಹುಣುಸೆ ಹುಳಿ - ಒಂದು ಸಣ್ಣ ನಿಂಬೆ ಹಣ್ಣಿನ ಗಾತ್ರದ್ದು
- ಬೆಲ್ಲ - ೨ ಟೇಬಲ್ ಚಮಚ
- ಎಣ್ಣೆ - ೩ ರಿಂದ ೪ ಟೀ ಚಮಚ
- ತೆಂಗಿನ ತುರಿ - ೨ ಟೇಬಲ್ ಚಮಚ
- ಕರಿಬೇವು - ೧ ಟೀ ಚಮಚ
- ಸಾಸಿವೆ - ೧ ಟೀ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ನೀರು - ಬೇಕಾದಷ್ಟು
ತಯಾರಿಸುವ ವಿಧಾನ
- ಮೊದಲಿಗೆ ಹುಣುಸೆ ಹುಳಿಯನ್ನು ೧೦ ರಿಂದ ೧೫ ನಿಮಿಷಗಳ ಕಾಲ ನೀರಲ್ಲಿ ನೆನೆಸಿಡಬೇಕು.
- ಒಂದು ಬಾಣಾಲೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ೫ ರಿಂದ ೬ ಮೆಣಸು ಹಾಕಿ ೧ ನಿಮಿಷಗಳ ಕಾಲ ಹುರಿಯಬೇಕು.
- ಒಂದು ಮಿಕ್ಸರ್ ಜಾರ್ ಗೆ ಹುರಿದ ಮೆಣಸು, ಕಿತ್ತಳೆ ಹಣ್ಣಿನ ಸಿಪ್ಪೆ (ಮುರಿದು ಹಾಕಬೇಕು ), ನೆನೆಸಿದ ಹುಣುಸೆ ಹುಳಿ, ತೆಂಗಿನ ತುರಿ ಮತ್ತು ಉಪ್ಪು ಹಾಕಿ ತರಿ ತರಿಯಾಗಿ ನೀರು ಹಾಕದೆ ರುಬ್ಬಬೇಕು.
- ತರಿ ತರಿಯಾಗಿ ರುಬ್ಬಿದ ಮಿಶ್ರಣಕ್ಕೆ ಬೆಲ್ಲ ಮತ್ತು ಬೇಕಾದಷ್ಟು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು..
- ಈಗ ಮೊದಲು ಉಪಯೋಗಿಸಿದ ಬಾಣಾಲೆಗೆ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿ ಆದ ನಂತರ ಅದಕ್ಕೆ ಸಾಸಿವೆ, ಮೆಣಸು, ಕರಿಬೇವು ಹಾಕಿ ಹುರಿಯಬೇಕು.
- ಸಾಸಿವೆ ಸಿಡಿದಾಗ ಅದಕ್ಕೆ ರುಬ್ಬಿದ ಮಿಶ್ರಣ, ಬೇಕಾದಷ್ಟು ನೀರು ಮತ್ತು ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು.
- ಈಗ ಆರೋಗ್ಯಕರವಾದ ಕಿತ್ತಳೆ ಹಣ್ಣಿನ ಸಿಪ್ಪೆ ಚಟ್ನಿ ತಯಾರಾಗಿದೆ.
- ಇದನ್ನು ಊಟದ ಜೊತೆ ತಿಂದರೆ ತುಂಬಾ ಚೆನ್ನಾಗಿ ಇರುತ್ತದೆ
Comments
Post a Comment